Home

Home

Wednesday, 11 September 2013

ಇನ್ಫೋಸಿಸ್ 3000 ಕೋಟಿ ರು ಷೇರು ಖರೀದಿಸಿದ LIC

ಬೆಂಗಳೂರು, ಜ.9: ಆರ್ಥಿಕ ಸಂಕಷ್ಟದಲ್ಲಿರುವ ದೇಶದ ಪ್ರತಿಷ್ಥಿತ ಐಟಿ ಕಂಪನಿ ಇನ್ಫೋಸಿಸ್ ಗೆ ಸೇರಿದ ಸುಮಾರು 3,000 ಕೋಟಿ ರೂ ಮೌಲ್ಯದ ಷೇರುಗಳನ್ನು ಸರ್ಕಾರಿ ಸ್ವಾಮ್ಯದ ವಿಮಾ ಕಂಪನಿ ಭಾರತೀಯ ಜೀವ ವಿಮಾ ನಿಗಮ (LIC) ಖರೀದಿಸಿದೆ. ಇದರೊಂದಿಗೆ Infosysನಲ್ಲಿ LICಯ ಪಾಲು ಶೇ. 6.3 ರಿಂದ ಶೇ 7ಕ್ಕೇರಿದೆ. ಪ್ರಸಕ್ತ ಆರ್ಥಿಕ ವರ್ಷದ ಆರಂಭದಲ್ಲಿ ಏ.1,2012ರ ಎಣಿಕೆಯಂತೆ ಇನ್ಫೋಸಿಸ್ ನಲ್ಲಿ ಎಲ್ ಐಸಿಯ ಪಾಲು ಶೇ 4.92ರಷ್ಟಿತ್ತು. ಷೇರು ಪೇಟೆ ಅತಿದೊಡ್ಡ ಹೂಡಿಕೆದಾರ ಸಂಸ್ಥೆಯಾಗಿ LIC ರೂಪುಗೊಂಡಿದೆ.

 ಈಗ ಒಟ್ಟಾರೆ ಇನ್ಫೋಸಿಸ್ ನಲ್ಲಿ ಎಲ್ ಐಸಿ ಷೇರುಗಳ ಪಾಲು ಶೇ. 7.24ನಷ್ಟಿದೆ. ಬುಧವಾರ(ಜ.9) ಮಧ್ಯಾಹ್ನ 1.30ರ ವೇಳೆಗೆ ಇನ್ಫೋಸಿಸ್ ಸಂಸ್ಥೆ ಷೇರುಗಳು 2339.00 ರು ನಂತೆ ಶೇ ೦.೦9ರಷ್ಟು ಕುಸಿತ ಕಂಡಿತ್ತು. ಇದೇ ವೇಳೆಯಲ್ಲಿ ಎನ್ ಎಸ್ ಇನಲ್ಲಿ 2337.00 ರು ನಂತೆ ಶೇ 0.30ರಷ್ಟು ಇಳಿದಿದೆ. ವಿದೇಶಿ ಹೂಡಿಕೆ ಸಂಸ್ಥೆಗಳು (FII) Infosys ಷೇರುಗಳಿಂದ ಮಾರು ದೂರವಾಗುತ್ತಿರುವಾಗ LIC ಕೈಹಿಡಿದಿರುವುದು Infosys ಪ್ರತಿಷ್ಠೆಯನ್ನು ಹೆಚ್ಚಿಸಿದೆ. 2002ರಲ್ಲಿ ಮೊದಲ ಬಾರಿಗೆ Infosysನಲ್ಲಿ ಶೇ. 2ರಷ್ಟು ಷೇರುಗಳನ್ನು ಖರೀದಿಸಿದ LIC ಸತತವಾಗಿ ಆ ಷೇರುಗಳನ್ನು ಖರೀದಿಸುತ್ತಿದೆ. ಅದಕ್ಕೂ ಮುನ್ನ ದೇಶದ ಷೇರು ವಹಿವಾಟಿನಲ್ಲಿ ಅತಿ ಹೆಚ್ಚು ಹೂಡಿಕೆ ಮಾಡುತ್ತಿದ್ದ ಹಿಂದಿನ Unit Trust of India (UTI) ಸಂಸ್ಥೆಯು Infosysನಲ್ಲಿ ಶೇ. 8ರಷ್ಟು ಷೇರುಗಳನ್ನು ಖರೀದಿಸಿತ್ತು. ಕೊನೆಗೆ ಅದು ಮುಚ್ಚಿಕೊಂಡು ಹೋಗುವ ವೇಳೆಗೆ 2003ರಲ್ಲಿ ಶೇ. 1ಕ್ಕೆ ಕುಸಿದಿತ್ತು. 2012ರಲ್ಲಿ LIC ಅಲ್ಲದೆ, ಅನೇಕ ವಿದೇಶಿ ಹೂಡಿಕೆದಾರರು ಇನ್ಫೋಸಿಸ್ ಮೇಲೆ ನಂಬಿಕೆ ಇಟ್ಟರು. Oppenheimer, Franklin Templeton, Aberdeen ಹಾಗೂ Vanguard ಪ್ರಮುಖ ಹೂಡಿಕೆ ಸಂಸ್ಥೆಗಳಾಗಿದೆ


ನಿರೀಕ್ಷೆ ತಕ್ಕ ಫಲವಿಲ್ಲ, ಎಸ್ ಬಿಐಗೆ 4% ಅಷ್ಟೇ ಲಾಭ

ಬೆಂಗಳೂರು, : ದೇಶದ ಅತಿದೊಡ್ಡ ಬ್ಯಾಂಕಿಂಗ್ ಜಾಲ ಹೊಂದಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ತ್ರೈಮಾಸಿಕ ವರದಿ ಗುರುವಾರ  ಪ್ರಕಟವಾಗಿದೆ. ನಿರೀಕ್ಷೆಗೆ ತಕ್ಕ ಫಲ ಸಿಗದಿದ್ದರೂ, ಎಸ್ ಬಿಐ ಡಿಸೆಂಬರ್ 31 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ 3396 ಕೋಟಿ ರು ನಂತೆ ಶೇ 4 ರಷ್ಟು ನಿವ್ವಳ ಲಾಭ ಗಳಿಸಿದೆ. ಗುರುವಾರ (ಫೆ.14) ಎಸ್ ಬಿಐ ಷೇರುಗಳು ಸ್ವಲ್ಪ ಡಲ್ ಆಗಿದ್ದವು.

 ಬಿಎಸ್ ಇನಲ್ಲಿ ಮಧ್ಯಾಹ್ನ 3.10ರ ಸುಮಾರಿಗೆ 2221.70 ರು ನಂತೆ ಶೇ 1.48 ರಷ್ಟು ಕುಸಿತ ಕಂಡಿತ್ತು. ಇದೇ ವೇಳೆ ಎನ್ ಎಸ್ ಇನಲ್ಲಿ 2221.00 ರು ನಂತೆ ಶೇ 1.49 ರಷ್ಟು ಇಳಿಮುಖವಾಗಿತ್ತು. ಸಂಸ್ಥೆಯ ನಿವ್ವಳ ಬಡ್ಡಿ ಆದಾಯ ಶೇ 2.7 ರಷ್ಟು ಕುಸಿತ ಕಂಡಿದ್ದು, 11,154 ಕೋಟಿ ಗಳಿಕೆಯಾಗಿದೆ. ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ ಇಳಿಕೆ ಕಂಡು ಬಂದಿದೆ. ಒಟ್ಟಾರೆ ನಿವ್ವಳ ಅನುತ್ಪಾದಕ ಆಸ್ತಿ(non performing assets) ಮೌಲ್ಯ 12.21 ರಷ್ಟಾಗಿದೆ. ಎರಡನೇ ತ್ರೈಮಾಸಿಕದಲ್ಲಿ ಶೇ 30.17 ರಷ್ಟು ನಿವ್ವಳ ಲಾಭ ಗಳಿಸಿದ್ದು 3,658 ಕೋಟಿ ರು ನಷ್ಟು ಗಳಿಸಿತ್ತು. ಸಂಸ್ಥೆಯ ನಿವ್ವಳ ಬಡ್ಡಿ ಆದಾಯ ಶೇ 5.3 ರಷ್ಟು ಏರಿಕೆ ಕಂಡು 10,973 ಕೋಟಿ ಗಳಿಕೆ ಬಂದಿದೆ. ಒಟ್ಟಾರೆ ನಿವ್ವಳ ಅನುತ್ಪಾದಕ ಆಸ್ತಿ(non performing assets) ಮೌಲ್ಯ ಶೇ 5.15 ರಷ್ಟಾಗಿದೆ. ಕಳೆದ ಬಾರಿ ಶೇ 4.19 ರಷ್ಟಿತ್ತು. ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸುಮಾರು 1,000 ಹೊಸ ಬ್ರ್ಯಾಂಚ್ ಗಳನ್ನು ಆರಂಭಿಸಲಿದ್ದು, 2013 ಮಾರ್ಚ್ ವೇಳೆಗೆ 15,000 ಬ್ರ್ಯಾಂಚ್ ತೆರೆಯುವ ನಿರೀಕ್ಷೆ ಹೊಂದಿದೆ. ಈ ವರ್ಷದಲ್ಲಿ 2,500 ಪ್ರೊಬೆಷನರಿ ಆಫೀಸರ್ ಗಳು, 12,000 ಅಧಿಕಾರಿಗಳು ಹಾಗೂ ಕ್ಲರ್ಕ್ ಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ ಎಂದು ಎಸ್ ಬಿಐ ಪ್ರಕಟಿಸಿದೆ. ಮಾರ್ಚ್ 31, 2012ಕ್ಕೆ ಅನ್ವಯವಾಗುವಂತೆ ಎಸ್ ಬಿಐ ನಲ್ಲಿ ಶಾಶ್ವತ ಉದ್ಯೋಗಿಗಳ ಸಂಖ್ಯೆ 2,15,481ನಷ್ಟಿದೆ

.

Thursday, 29 August 2013

ಷೇರು ಮಾರುಕಟ್ಟೆ ರೂಪಾಯಿ ದಾಖಲೆ ಕುಸಿತ

 ಅಮೆರಿಕದ ಡಾಲರ್ ಎದುರು ರುಪಾಯಿ ಮತ್ತೊಮ್ಮೆ ದಾಖಲೆ  ಕುಸಿತ ಕಂಡಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಳಗ್ಗೆ ವಹಿವಾಟು ಆರಂಭದಲ್ಲೇ ಡಾಲರ್ ಎದುರು ರುಪಾಯಿ ಮೌಲ್ಯ ಇಳಿಕೆಯಾಗಿ 59.70ಕ್ಕೆ ಕುಸಿಯಿತು. ಅದರೆ, ಚೇತರಿಕೆ ಕಾಣಿಸಿಕೊಳ್ಳುವ ಲಕ್ಷಣ ಕಂಡು ಬರಲಿಲ್ಲ. ಇದರ ಜೊತೆಗೆ ಯುಎಸ್ ರಿಸರ್ವ್ ಚೇರ್ಮನ್ ಬೆನ್ ಬೆರ್ನಾಂಜೆ ಹೇಳಿಕೆ ಇನ್ನಷ್ಟು ಕಂಗಾಲು ಮೂಡಿಸಿದೆ.
ಡಾಲರ್ ಬೇಡಿಕೆ ಹೆಚ್ಚಾಗಿದ್ದು, ಸಾಗರೋತ್ತರ ಕರೆನ್ಸಿ ಎದುರು ಡಾಲರ್ ಮೌಲ್ಯ ಚೇತರಿಕೆ ಕಂಡಿದ್ದು ರುಪಾಯಿ ಕುಸಿತಕ್ಕೆ ಕಾರಣವಾಯಿತು. ಯುರೋ ಎದುರು ಡಾಲರ್ ಸ್ಥಿರವಾಗಿದ್ದೆ ತಡ ಆಮದುದಾರರು ಡಾಲರ್ ಬೇಡಿಕೆ ಮುಗಿಬಿದ್ದರು ಅಲ್ಲಿಗೆ ರುಪಾಯಿ ಸ್ಥಿತಿ ಅಧೋಗತಿಗೆ ಇಳಿಯಿತು.
ಯುಎಸ್ ರಿಸರ್ವ್ ಚೇರ್ಮನ್ ಬೆರ್ನಾಂಕೆ ಪ್ರಕಾರ ಭಾರತದಲ್ಲಿನ ಈಕ್ವಿಟಿ ಹಾಗೂ ವಿದೇಶಿ ಬಾಂಡ್ ಮಾರಾಟ ಅಧಿಕವಾಗಲಿದೆ. ಡಾಲರ್ ಬೇಡಿಕೆ ಹೀಗೆ ಮುಂದುವರೆಯುವುದರಿಂದ ರುಪಾಯಿ ಮೌಲ್ಯ ಇನ್ನಷ್ಟು ಕುಸಿಯುವ ಸಾಧ್ಯತೆಯಿದೆ. ಬುಧವಾರ ದಿನದ ಅಂತ್ಯಕ್ಕೆ ರುಪಾಯಿ ಮೌಲ್ಯ 58.71 ಕ್ಕೆ ಕುಸಿದಿತ್ತು. 60 ರ ಗಡಿ ದಾಟುವ ಎಲ್ಲಾ ಲಕ್ಷಣಗಳು ಕಂಡು ಬಂದಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.
ಕಳೆದ ಅಕ್ಟೋಬರ್ -ಡಿಸೆಂಬರ್ 2012-13 ಅವಧಿಯಲ್ಲಿ ಭಾರತದ ಆರ್ಥಿಕ ಪ್ರಗತಿ ದರ ಅಥವಾ ಜಿಡಿಪಿಯ ಚಾಲ್ತಿ ಖಾತೆ ಕೊರತೆ ಶೇ 6.7 ರಷ್ಟು ಕುಸಿದಿತ್ತು. ವಿತ್ತೀಯ ಕೊರತೆ ಮತ್ತು ಚಾಲ್ತಿ ಖಾತೆ ಕೊರತೆ ತಗ್ಗಿಸುವ ಪ್ರಯತ್ನಗಳೂ ನಿರೀಕ್ಷಿತ ಫಲ ನೀಡಿಲ್ಲ.
ವಿತ್ತೀಯಕೊರತೆ ನೀಗಿಸಲು ಚಿನ್ನದ ಆಮದು ಮೇಲೆ ನಿಯಂತ್ರಣ ಸಾಧಿಸಲೇ ಬೇಕಾಗಿದೆ. ವಿತ್ತೀಯ ಕೊರತೆ ಹೆಚ್ಚಿದ್ದಂತೆ ದೇಶದ ವಿದೇಶಿ ವಿನಿಯಮಕ್ಕೆ ಹೊಡೆತ ಬೀಳುತ್ತದೆ. ರುಪಾಯಿ ಮೌಲ್ಯ ವ್ಯತ್ಯಯವಾಗಲಿದೆ ಎಂದು ಚಿದಂಬರಂ ಹೇಳಿದ್ದರು.
ಆದರೆ, ನಂತರ ರುಪಾಯಿ ಮೌಲ್ಯ ಕುಸಿತ, ವಿತ್ತೀಯ ಕೊರತೆ ನೀಗಿಸಲು ಕೆಲವು ಕ್ರಮಗಳನ್ನು ಈಗಾಗಲೆ ತೆಗೆದುಕೊಳ್ಳಲಾಗಿದೆ. ಚಂದ್ರಶೇಖರ್ ಸಮಿತಿ ವರದಿ ಆಧಾರದ ಮೇಲೆ ಸೆಬಿ ನೀಡಿರುವ ಅಗತ್ಯ ಕ್ರಮಗಳನ್ನು ಪಾಲಿಸಲು ಮಾರ್ಗ ಸೂಚಿ ಸಿದ್ದವಾಗಿದೆ. ಅನಿಲ ದರ, ಎಫ್ ಡಿಐ ಮಿತಿ, ಕಲ್ಲಿದಲು ಗೊಂದಲ ಜೂನ್ ಅಂತ್ಯಕ್ಕೆ ಕೊನೆಗೊಳ್ಳಲಿದೆ ಎಂದು ವಿತ್ತ ಸಚಿವ ಚಿದಂಬರಂ ಭರವಸೆ ನೀಡಿದ್ದರು.

ಯುಪಿಎ ಸರ್ಕಾರ ಬೆಲೆ ಏರಿಕೆ ಬಾಂಬ್ ಮತ್ತೆ ಯಾವಾಗ ಸ್ಫೋಟಗೊಳ್ಳುತ್ತದೆ ಎಂಬುದು ಜನ ಸಾಮಾನ್ಯರನ್ನು ಕಾಡುತ್ತಿದೆ. ಪೆಟ್ರೋಲ್, ಡೀಸೆಲ್, ಆಹಾರ, ಚಿನ್ನ, ಕೊನೆಗೆ ಬ್ಯಾಂಕ್ ಸಾಲದ ಮೇಲೆ ರುಪಾಯಿ ಮೌಲ್ಯ ಕುಸಿತ ನೇರ ಪರಿಣಾಮ ಬೀರಲಿದೆ.