ರ್ನಾಟಕ ಬ್ಯಾಂಕಿನಲ್ಲಿ ಆಫೀಸರ್(ಸ್ಕೇಲ್ 1) ಹುದ್ದೆಗೆ ನೇಮಕಾತಿ ಆರಂಭವಾಗಿದೆ. ಯೋಗ್ಯ ಅಭ್ಯರ್ಥಿಗಳು ನ.7ರೊಳಗೆ ಅರ್ಜಿ ಸಲ್ಲಿಸಬಹುದು. ಹುದ್ದೆ ವಿವರ: ಆಫೀಸರ್ (ಸ್ಕೇಲ್ 1) ವಯೋಮಿತಿ: ಅಭ್ಯರ್ಥಿ ವಯಸ್ಸು ಕನಿಷ್ಠ 21 ವರ್ಷ ಗರಿಷ್ಠ 28 (2/10/1986)ರಿಂದ 01/10/1993 ರ ಅವಧಿಯಲ್ಲಿ ಜನಿಸಿದವರಾಗಿರಬೇಕು. ಎಸ್ ಸಿ/ಎಸ್ ಟಿ ಅಭ್ಯರ್ಥಿಗಳಿಗೆ 5 ವರ್ಷ ರಿಯಾಯಿತಿ ಇದೆ. ವಿದ್ಯಾರ್ಹತೆ: ಕೃಷಿ ವಿಜ್ಞಾನ ಅಥವಾ ಕಾನೂನು ಪದವಿ ಅಥವಾ ಯಾವುದೇ ಸ್ನಾತಕೋತ್ತರ ಪದವಿ ಹೊಂದಿರಬೇಕು. ಆಯ್ಕೆ ಪ್ರಕ್ರಿಯೆ: ಆನ್ ಲೈನ್ ಪರೀಕ್ಷೆ ಹಾಗೂ ಸಂದರ್ಶನವಿರುತ್ತದೆ. [ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ] ಅರ್ಜಿ ಶುಲ್ಕ: ಅರ್ಜಿ ಶುಲ್ಕ 600 ರು ಸಾಮಾನ್ಯ ಅಭ್ಯರ್ಥಿಗೆ, ಎಸ್ ಸಿ ಎಸ್ಟಿ ಅಭ್ಯರ್ಥಿಗಳಿಗೆ 500 ರು. ಆನ್ ಲೈನ್ ಮೂಲಕ ಹಣ ಪಾವತಿಸಬಹುದು. ಅರ್ಜಿ ಸಲ್ಲಿಸುವುದು ಹೇಗೆ?: ಅರ್ಹ ಅಭ್ಯರ್ಥಿಗಳೂ ಆನ್ ಲೈನ್ ಮೂಲಕ 21/10/2014 ರಿಂದ 7/11/2014 ರೊಳಗೆ ಅರ್ಜಿ ಸಲ್ಲಿಸಿ ಇ ರಸೀತಿ ಪಡೆದುಕೊಳ್ಳಬಹುದು. ನಿಬಂಧನೆಗಳು: * ಅಭ್ಯರ್ಥಿಗಳು ತಮ್ಮ ಭಾವಚಿತ್ರ, ಹಸ್ತಾಕ್ಷರ, ಇಮೇಲ್ ಇಡಿ, ಮೊಬೈಲ್ ನಂಬರ್ ವಿವರಗಳ ಸ್ಕ್ಯಾನ್ ಕಾಪಿ ಹೊಂದಿರಬೇಕು. * ಕರ್ನಾಟಕ ಬ್ಯಾಂಕ್ ನ ವೆಬ್ ತಾಣಕ್ಕೆ ಭೇಟಿ ಕೊಡಲು ಈ ಲಿಂಕ್ ಕ್ಲಿಕ್ ಮಾಡಿ * ಆಫೀಸರ್ (ಸ್ಕೇಲ್ 1) ಕ್ಲಿಕ್ ಮಾಡಿ ಆನ್ ಲೈನ್ ನೋಂದಣಿ ಮಾಡಿಕೊಳ್ಳಿ * ಅರ್ಜಿ ಭರ್ತಿ ಮಾಡಿ, ಭಾವಚಿತ್ರ ಇನ್ನಿತರ ದಾಖಲೆಗಳ ಸ್ಕ್ಯಾನ್ ಕಾಪಿ ಅಪ್ ಲೋಡ್ ಮಾಡಿ. * ನೋಂದಾಯಿತ ಅಭ್ಯರ್ಥಿ ಸಂಖ್ಯೆ, ಪಾಸ್ ವರ್ಡ್ ಹಾಗೂ ಇ ರಸೀತಿ ಪಡೆದುಕೊಳ್ಳಿ. ಆನ್ ಲೈನ್ ಪರೀಕ್ಷೆಗಳು ಡಿಸೆಂಬರ್ ನಲ್ಲಿ ನಡೆಯುವ ಸಾಧ್ಯತೆಯಿದೆ. ಹೆಚ್ಚಿನ ವಿವರಗಳಿಗೆ ಇ ಮೇಲ್ ಮಾಡಿ ibpso@ibps.in